Jesus Followers Logo

Jesus Followers

ಜೀಸಸ್ ಫಾಲೋವರ್ಸ್

Ministries ಮಿನಿಸ್ಟ್ರಿಸ್
Children Ministry Background

Children's Ministry

ಮಕ್ಕಳ ಸೇವೆ

Nurturing the next generation in grace, faith, and character

ಮುಂದಿನ ಪೀಳಿಗೆಯನ್ನು ಕೃಪೆ, ನಂಬಿಕೆ ಮತ್ತು ಸಚ್ಚಾರಿತ್ರ್ಯದಲ್ಲಿ ಬೆಳೆಸುವುದು

Choose Ministry Service ಸೇವಾ ಚಟುವಟಿಕೆ ಆಯ್ಕೆಮಾಡಿ Churchಸಭೆ Evangelismಸುವಾರ್ತೆ Villageಗ್ರಾಮೀಣ Childrenಮಕ್ಕಳು Bible Classesಬೈಬಲ್ ತರಗತಿ Digital Mediaಡಿಜಿಟಲ್ ಮಾಧ್ಯಮ

Vision & Mission ದೂರದೃಷ್ಟಿ ಮತ್ತು ಧ್ಯೇಯ

Our Vision ನಮ್ಮ ದೂರದೃಷ್ಟಿ

To raise a generation of children who know the love of Jesus, walk in moral excellence, and serve as beacons of light in their families and communities.

ಯೇಸುವಿನ ಪ್ರೀತಿಯನ್ನು ಅರಿತ, ನೈತಿಕ ಶ್ರೇಷ್ಠತೆಯಲ್ಲಿ ನಡೆಯುವ ಮತ್ತು ತಮ್ಮ ಕುಟುಂಬ ಹಾಗೂ ಸಮುದಾಯಗಳಲ್ಲಿ ಬೆಳಕಿನ ದೀವಿಗೆಗಳಾಗಿ ಬೆಳಗುವ ಮಕ್ಕಳ ಪೀಳಿಗೆಯನ್ನು ಸಿದ್ಧಪಡಿಸುವುದು ನಮ್ಮ ದೂರದೃಷ್ಟಿಯಾಗಿದೆ.

Our Mission ನಮ್ಮ ಧ್ಯೇಯ

To protect children's innocence by providing happy, faith-filled Sunday school programs, moral worksheets, animated stories, and essential educational support.

ಭಾನುವಾರದ ಶಾಲೆಗಳು, ನೈತಿಕ ವರ್ಕ್‌ಶೀಟ್‌ಗಳು, ಆನಿಮೇಟೆಡ್ ಕಥೆಗಳು ಮತ್ತು ಶೈಕ್ಷಣಿಕ ಸಹಾಯದ ಮೂಲಕ ಮಕ್ಕಳ ಬಾಲ್ಯಕ್ಕೆ ಸುರಕ್ಷಿತ ನಂಬಿಕೆಯ ಅಡಿಪಾಯವನ್ನು ಒದಗಿಸುವುದು.

"Train up a child in the way he should go: and when he is old, he will not depart from it."

"ಬಾಲಕನು ನಡೆಯಬೇಕಾದ ಮಾರ್ಗವನ್ನು ಅವನಿಗೆ ಕಲಿಸು; ಅವನು ವೃದ್ಧನಾದಾಗಲೂ ಅದನ್ನು ಬಿಟ್ಟು ತೊಲಗನು."

— Proverbs 22:6 — ಜ್ಞಾನೋಕ್ತಿಗಳು 22:6

Operations & Engagement ಕಾರ್ಯವಿಧಾನಗಳು ಮತ್ತು ಒಳಗೊಳ್ಳುವಿಕೆ

How We Do It ನಾವು ಕಾರ್ಯನಿರ್ವಹಿಸುವ ವಿಧಾನ

We teach children using interactive bilingual Bible stories, educational worksheets, animated learning videos, fun camps, and games.

ನಾವು ಬೈಬಲ್ ಕಥೆಗಳು, ಕಲಿಕಾ ವರ್ಕ್‌ಶೀಟ್‌ಗಳು, ಆನಿಮೇಟೆಡ್ ವಿಡಿಯೋಗಳು ಮತ್ತು ಬೈಬಲ್ ಆಟಗಳ ಮೂಲಕ ಮಕ್ಕಳಿಗೆ ಬೋಧಿಸುತ್ತೇವೆ.

  • Bilingual Sunday Schools ದ್ವಿಭಾಷಾ ಭಾನುವಾರದ ಶಾಲೆಗಳು
  • Animated Bible Story Videos ಆನಿಮೇಟೆಡ್ ಬೈಬಲ್ ಕಥೆಗಳು
  • Interactive Bible Games Room ಸಂವಾದಾತ್ಮಕ ಬೈಬಲ್ ಆಟಗಳ ಕೊಠಡಿ
  • School Kits & Notebook Distribution ಶಾಲಾ ಪರಿಕರಗಳು ಮತ್ತು ಪುಸ್ತಕಗಳ ವಿತರಣೆ

How You Can Do This Ministry ನೀವು ಈ ಸೇವೆಯಲ್ಲಿ ಹೇಗೆ ಪಾಲ್ಗೊಳ್ಳಬಹುದು

  • Bring your children to our Sunday classes and play our interactive web Bible games with them. ನಿಮ್ಮ ಮಕ್ಕಳನ್ನು ಭಾನುವಾರದ ತರಗತಿಗಳಿಗೆ ಕರೆತನ್ನಿ ಮತ್ತು ಅವರೊಂದಿಗೆ ನಮ್ಮ ಬೈಬಲ್ ವೆಬ್ ಆಟಗಳನ್ನು ಆಡಿ.
  • Volunteer as a Sunday school teacher or assist in organizing games and seasonal children camps. ಭಾನುವಾರದ ಶಾಲಾ ಶಿಕ್ಷಕರಾಗಿ ಸೇವೆ ಸಲ್ಲಿಸಿ ಅಥವಾ ಬೈಬಲ್ ಶಿಬಿರಗಳನ್ನು ಆಯೋಜಿಸಲು ಸ್ವಯಂಸೇವಕರಾಗಿ.
  • Sponsor educational kits, school bags, notebooks, and pencils for rural and forest village children. ಗ್ರಾಮೀಣ ಮತ್ತು ಅರಣ್ಯ ಪ್ರದೇಶದ ಬಡ ಮಕ್ಕಳಿಗೆ ಶೈಕ್ಷಣಿಕ ಕಿಟ್ ಮತ್ತು ಪುಸ್ತಕಗಳನ್ನು ಪ್ರಾಯೋಜಿಸಿ.

What's the Plan (Our Roadmap) ಕಾರ್ಯಯೋಜನೆ (ಮುಂದಿನ ಹಾದಿ)

Our focus for the children is expanding educational opportunities and moral training. We plan to reach underprivileged children in tribal and remote villages.

ಮಕ್ಕಳಿಗಾಗಿ ನಮ್ಮ ಪ್ರಮುಖ ಗಮನವು ಶೈಕ್ಷಣಿಕ ಅವಕಾಶಗಳು ಮತ್ತು ನೈತಿಕ ಶಿಕ್ಷಣವನ್ನು ವಿಸ್ತರಿಸುವುದರ ಮೇಲಿದೆ. ಕಾಡುಹಳ್ಳಿ ಮತ್ತು ಬುಡಕಟ್ಟು ಪ್ರದೇಶದ ಬಡ ಮಕ್ಕಳನ್ನು ತಲುಪಲು ನಾವು ಯೋಜನೆ ರೂಪಿಸಿದ್ದೇವೆ.

Phase 1: Classes & Kits ಹಂತ ೧: ಶಾಲೆಗಳು ಮತ್ತು ಶೈಕ್ಷಣಿಕ ಕಿಟ್

Establish Sunday School branches in 10 remote forest villages, distribute 500 comprehensive school supply kits (bags, books, pencils), and train 5 children's coordinators.

೧೦ ದೂರದ ಅರಣ್ಯ ಹಳ್ಳಿಗಳಲ್ಲಿ ಭಾನುವಾರದ ಬೈಬಲ್ ಶಾಲೆಗಳ ಶಾಖೆಗಳನ್ನು ಸ್ಥಾಪಿಸುವುದು, ೫೦೦ ಬಡ ಮಕ್ಕಳಿಗೆ ಶೈಕ್ಷಣಿಕ ಪರಿಕರಗಳ ಕಿಟ್‌ಗಳನ್ನು (ಬ್ಯಾಗ್, ಪುಸ್ತಕ, ಪೆನ್ಸಿಲ್) ವಿತರಿಸುವುದು ಮತ್ತು ೫ ಹೊಸ ಮಕ್ಕಳ ಕಾರ್ಯಕರ್ತರಿಗೆ ತರಬೇತಿ ನೀಡುವುದು.

Phase 2: Bible Camps & Fun ಹಂತ ೨: ಬೈಬಲ್ ಶಿಬಿರಗಳು ಮತ್ತು ಮೋಜು

Organize a massive, multi-day summer Vacation Bible School (VBS) camp for over 300 children with interactive competitions, music instruction, and character building games.

೩೦೦ಕ್ಕೂ ಹೆಚ್ಚು ಮಕ್ಕಳಿಗೆ ಸೃಜನಶೀಲ ಸ್ಪರ್ಧೆಗಳು, ಸಂಗೀತ ಬೋಧನೆ ಮತ್ತು ನೈತಿಕ ಆಟಗಳೊಂದಿಗೆ ಬಹು-ದಿನಗಳ ಬೇಸಿಗೆ ಬೈಬಲ್ ತರಬೇತಿ ಶಿಬಿರವನ್ನು (VBS) ಆಯೋಜಿಸುವುದು.

How We Follow Christ ನಾವು ಕ್ರಿಸ್ತನನ್ನು ಹಿಂಬಾಲಿಸುವ ಹಾದಿ

Jesus actively welcomed children, laid His hands on them, and blessed them when others turned them away. He warned against causing any little one to stumble. We follow Jesus by providing safe, supportive, and joyful environments for children to learn and play. We protect their innocence, help them build foundational Christian values, and show them they are valued members of God's family.

ಇತರರು ದೂರ ತಳ್ಳಿದಾಗಲೂ ಯೇಸು ಮಕ್ಕಳನ್ನು ಪ್ರೀತಿಯಿಂದ ಬರಮಾಡಿಕೊಂಡರು, ಅವರ ಮೇಲೆ ಕೈಗಳನ್ನಿಟ್ಟು ಆಶೀರ್ವದಿಸಿದರು. ಯಾವುದೇ ಮಗುವಿಗೆ ತೊಂದರೆ ಉಂಟುಮಾಡುವುದರ ವಿರುದ್ಧ ಆತನು ಎಚ್ಚರಿಸಿದರು. ಮಕ್ಕಳು ಕಲಿಯಲು ಮತ್ತು ಆಟವಾಡಲು ಸುರಕ್ಷಿತವಾದ, ಬೆಂಬಲಿಸುವ ಮತ್ತು ಸಂತೋಷದಾಯಕ ವಾತಾವರಣವನ್ನು ಒದಗಿಸುವ ಮೂಲಕ ನಾವು ಯೇಸುವನ್ನು ಅನುಸರಿಸುತ್ತೇವೆ. ನಾವು ಅವರ ಮುಗ್ಧತೆಯನ್ನು ರಕ್ಷಿಸುತ್ತೇವೆ, ಅವರಿಗೆ ಬೈಬಲ್ ಮೌಲ್ಯಗಳನ್ನು ಕಲಿಯಲು ಸಹಾಯ ಮಾಡುತ್ತೇವೆ ಮತ್ತು ಅವರು ದೇವರ ಕುಟುಂಬದ ಪ್ರಮುಖ ಸದಸ್ಯರು ಎಂಬುದನ್ನು ತೋರಿಸಿಕೊಡುತ್ತೇವೆ.

Play Bible Games ಬೈಬಲ್ ಆಟವಾಡಿ Watch Bible Stories ಕಥೆಗಳನ್ನು ವೀಕ್ಷಿಸಿ