Vision & Mission ದೂರದೃಷ್ಟಿ ಮತ್ತು ಧ್ಯೇಯ
Our Vision ನಮ್ಮ ದೂರದೃಷ್ಟಿ
To build a vibrant local church family that gathers weekly to praise God, study His scriptures, and encourage each other in spiritual fellowship.
ದೇವರನ್ನು ಕೊಂಡಾಡಲು, ಆತನ ವಾಕ್ಯಗಳನ್ನು ಅಧ್ಯಯನ ಮಾಡಲು ಮತ್ತು ಆಧ್ಯಾತ್ಮಿಕ ಸಹಭಾಗಿತ್ವದಲ್ಲಿ ಪರಸ್ಪರ ಪ್ರೋತ್ಸಾಹಿಸಲು ವಾರಕ್ಕೊಮ್ಮೆ ಸೇರುವ ರೋಚಕ ಸ್ಥಳೀಯ ಸಭೆಯ ಕುಟುಂಬವನ್ನು ಕಟ್ಟುವುದು ನಮ್ಮ ದೂರದೃಷ್ಟಿಯಾಗಿದೆ.
Our Mission ನಮ್ಮ ಧ್ಯೇಯ
To make disciples of all nations, build strong Christian homes centered on Christ's unconditional love, and provide a welcoming sanctuary for every soul seeking truth.
ಎಲ್ಲಾ ಜನಾಂಗಗಳನ್ನು ಶಿಷ್ಯರನ್ನಾಗಿ ಮಾಡುವುದು, ಕ್ರಿಸ್ತನ ಬೇಷರತ್ತಾದ ಪ್ರೀತಿಯ ಮೇಲೆ ಕೇಂದ್ರೀಕೃತವಾದ ಬಲವಾದ ಕ್ರಿಶ್ಚಿಯನ್ ಮನೆಗಳನ್ನು ಕಟ್ಟುವುದು ಮತ್ತು ಸತ್ಯವನ್ನು ಹುಡುಕುವ ಪ್ರತಿಯೊಂದು ಆತ್ಮಕ್ಕೂ ಸ್ವಾಗತಾರ್ಹ ಆಶ್ರಯವನ್ನು ಒದಗಿಸುವುದು.
"Not forsaking the assembling of ourselves together, as the manner of some is; but exhorting one another: and so much the more, as ye see the day approaching."
"ಕೆಲವರು ಕೂಡಿಬರುವುದನ್ನು ಬಿಟ್ಟುಬಿಡುವ ವಾಡಿಕೆಯಂತೆ ನಾವು ಒಟ್ಟುಗೂಡುವುದನ್ನು ಬಿಡದೆ, ಪರಸ್ಪರ ಪ್ರೋತ್ಸಾಹಿಸೋಣ; ಕರ್ತನ ದಿನವು ಹತ್ತಿರವಾಗುತ್ತಿರುವುದನ್ನು ನೋಡಿದಷ್ಟೂ ಹೆಚ್ಚು ಹೆಚ್ಚಾಗಿ ಹಾಗೆ ಮಾಡೋಣ."
— Hebrews 10:25 — ಇಬ್ರಿಯರಿಗೆ 10:25Operations & Engagement ಕಾರ್ಯವಿಧಾನಗಳು ಮತ್ತು ಒಳಗೊಳ್ಳುವಿಕೆ
How We Do It ನಾವು ಕಾರ್ಯನಿರ್ವಹಿಸುವ ವಿಧಾನ
We organize structured weekly services in Kannada and English, mid-week cottage prayer meetings, and intercessory prayer sessions to build fellowship.
ನಾವು ಕನ್ನಡ ಮತ್ತು ಇಂಗ್ಲಿಷ್ನಲ್ಲಿ ವಾರದ ಆರಾಧನೆಗಳು, ವಾರದ ಮಧ್ಯದ ಮನೆ ಪ್ರಾರ್ಥನೆ ಕೂಟಗಳು ಮತ್ತು ಮಧ್ಯಸ್ಥಿಕೆ ಪ್ರಾರ್ಥನಾ ಸಭೆಗಳನ್ನು ಆಯೋಜಿಸುತ್ತೇವೆ.
- Sunday Worship Services ಭಾನುವಾರ ಬೆಳಿಗ್ಗೆ & ಸಂಜೆ ಆರಾಧನೆ
- Wednesday Ladies Fellowships ಬುಧವಾರದ ಮಹಿಳಾ ಕೂಟಗಳು
- Thursday Family Cottage Meetings ಗುರುವಾರದ ಮನೆ ಪ್ರಾರ್ಥನೆ ಕೂಟಗಳು
- Friday Intercessory Fasting Prayers ಶುಕ್ರವಾರದ ಉಪವಾಸ ಮತ್ತು ಕಣ್ಣೀರಿನ ಪ್ರಾರ್ಥನೆ
How You Can Do This Ministry ನೀವು ಈ ಸೇವೆಯಲ್ಲಿ ಹೇಗೆ ಪಾಲ್ಗೊಳ್ಳಬಹುದು
- Attend our weekly worship and mid-week prayer meetings regularly to grow in fellowship. ಸಹಭಾಗಿತ್ವದಲ್ಲಿ ಬೆಳೆಯಲು ನಮ್ಮ ವಾರದ ಆರಾಧನೆ ಮತ್ತು ವಾರದ ಮಧ್ಯದ ಪ್ರಾರ್ಥನಾ ಸಭೆಗಳಿಗೆ ನಿಯಮಿತವಾಗಿ ಹಾಜರಾಗಿ.
- Volunteer to serve in church hospitality, welcoming new visitors, or joining the praise and worship team. ಚರ್ಚ್ನ ಅತಿಥಿ ಸತ್ಕಾರ, ಹೊಸಬರನ್ನು ಸ್ವಾಗತಿಸುವುದು ಅಥವಾ ಆರಾಧನಾ ತಂಡದಲ್ಲಿ ಸೇವೆ ಸಲ್ಲಿಸಲು ಸ್ವಯಂಸೇವಕರಾಗಿ.
- Host a neighborhood cottage prayer meeting at your home to gather and build local communities. ಸ್ಥಳೀಯ ಸಮುದಾಯಗಳನ್ನು ಒಟ್ಟುಗೂಡಿಸಲು ನಿಮ್ಮ ಮನೆಯಲ್ಲಿ ಮನೆ ಪ್ರಾರ್ಥನೆ ಕೂಟವನ್ನು ಆಯೋಜಿಸಿ.
What's the Plan (Our Roadmap) ಕಾರ್ಯಯೋಜನೆ (ಮುಂದಿನ ಹಾದಿ)
Our focus is on spiritual maturity and creating deep roots in local fellowship. We have mapped out concrete phases to expand the local church ministry so that every member can discover and exercise their spiritual gifts effectively.
ನಮ್ಮ ಗಮನವು ಆಧ್ಯಾತ್ಮಿಕ ಪರಿಪಕ್ವತೆ ಮತ್ತು ಸ್ಥಳೀಯ ಸಹಭಾಗಿತ್ವದಲ್ಲಿ ಆಳವಾದ ಬೇರುಗಳನ್ನು ಸೃಷ್ಟಿಸುವುದರ ಮೇಲಿದೆ. ಪ್ರತಿಯೊಬ್ಬ ಸದಸ್ಯರು ತಮ್ಮ ಆಧ್ಯಾತ್ಮಿಕ ವರಗಳನ್ನು ಕಂಡುಕೊಂಡು ಬಳಸಿಕೊಳ್ಳಲು ಸಹಾಯವಾಗುವಂತೆ ಸಭೆಯ ಸೇವೆಯನ್ನು ವಿಸ್ತರಿಸಲು ನಾವು ನಿರ್ದಿಷ್ಟ ಹಂತಗಳನ್ನು ಯೋಜಿಸಿದ್ದೇವೆ.
Phase 1: Local Discipleship ಹಂತ ೧: ಸ್ಥಳೀಯ ಶಿಷ್ಯತ್ವ ತರಬೇತಿ
Establish mid-week cottage prayer cells in new neighborhoods, launch specialized youth counseling groups, and formulate a structured weekly discipleship pathway for new believers.
ಹೊಸ ಬಡಾವಣೆಗಳಲ್ಲಿ ವಾರದ ಮಧ್ಯದ ಮನೆ ಪ್ರಾರ್ಥನೆ ಕೂಟಗಳನ್ನು ಸ್ಥಾಪಿಸುವುದು, ಯುವಜನರಿಗಾಗಿ ವಿಶೇಷ ಸಮಾಲೋಚನಾ ಗುಂಪುಗಳನ್ನು ಪ್ರಾರಂಭಿಸುವುದು ಮತ್ತು ಹೊಸ ವಿಶ್ವಾಸಿಗಳಿಗೆ ಕ್ರಮಬದ್ಧ ವಾರದ ಶಿಷ್ಯತ್ವ ಬೋಧನೆಯನ್ನು ರೂಪಿಸುವುದು.
Phase 2: Leadership & Care ಹಂತ ೨: ನಾಯಕತ್ವ ಮತ್ತು ಪೋಷಣೆ
Train dedicated cell group leaders to manage pastoral care, establish a benevolent care fund for church widows and families in emergency medical situations, and host annual spiritual growth retreats.
ಆಧ್ಯಾತ್ಮಿಕ ಪೋಷಣೆಯನ್ನು ನಿರ್ವಹಿಸಲು ಸಮರ್ಪಿತ ಸಭೆಯ ಗುಂಪು ನಾಯಕರಿಗೆ ತರಬೇತಿ ನೀಡುವುದು, ಸಭೆಯ ವಿಧವೆಯರು ಮತ್ತು ತುರ್ತು ವೈದ್ಯಕೀಯ ಅಗತ್ಯದಲ್ಲಿರುವ ಕುಟುಂಬಗಳಿಗಾಗಿ ಸಹಾಯ ನಿಧಿಯನ್ನು ಸ್ಥಾಪಿಸುವುದು ಮತ್ತು ವಾರ್ಷಿಕ ಕೌಟುಂಬಿಕ ಕೂಟಗಳನ್ನು ನಡೆಸುವುದು.
How We Follow Christ ನಾವು ಕ್ರಿಸ್ತನನ್ನು ಹಿಂಬಾಲಿಸುವ ಹಾದಿ
Following Jesus means walking in His footsteps of sacrificial service and truth. Through our church ministry, we follow Christ's command of discipleship: teaching believers to live out biblical truths daily, building strong Christian homes, and extending hands of support to widows, the sick, and those suffering in our community. We emphasize holiness, prayer, and mutual care as the foundation of church life.
ಯೇಸುವನ್ನು ಹಿಂಬಾಲಿಸುವುದು ಎಂದರೆ ಆತನ ತ್ಯಾಗದ ಸೇವೆ ಮತ್ತು ಸತ್ಯದ ಹೆಜ್ಜೆಗಳಲ್ಲಿ ನಡೆಯುವುದು. ನಮ್ಮ ಸಭೆಯ ಸೇವೆಯ ಮೂಲಕ, ನಾವು ಕ್ರಿಸ್ತನ ಶಿಷ್ಯತ್ವದ ಆಜ್ಞೆಯನ್ನು ಪಾಲಿಸುತ್ತೇವೆ: ವಿಶ್ವಾಸಿಗಳಿಗೆ ಪ್ರತಿದಿನ ಬೈಬಲ್ ಸತ್ಯಗಳಂತೆ ಜೀವಿಸಲು ಬೋಧಿಸುವುದು, ಬಲವಾದ ಕ್ರಿಶ್ಚಿಯನ್ ಮನೆಗಳನ್ನು ಕಟ್ಟುವುದು ಮತ್ತು ನಮ್ಮ ಸಮುದಾಯದಲ್ಲಿರುವ ವಿಧವೆಯರು, ರೋಗಿಗಳು ಮತ್ತು ಸಂಕಷ್ಟದಲ್ಲಿರುವವರಿಗೆ ಸಹಾಯದ ಹಸ್ತವನ್ನು ಚಾಚುವುದು. ನಾವು ಚರ್ಚ್ ಜೀವನದ ಅಡಿಪಾಯವಾಗಿ ಪವಿತ್ರತೆ, ಪ್ರಾರ್ಥನೆ ಮತ್ತು ಪರಸ್ಪರ ಕಾಳಜಿಗೆ ಒತ್ತು ನೀಡುತ್ತೇವೆ.